ಕೃಷ್ಣ~ಆನಂದದ ಆಗರ
ಕೃಷ್ಣ ಎನ್ನುವ ಶಬ್ದಕ್ಕೆ ಆನಂದದ ಉತ್ತುಂಗ ಶೃಂಗ ಎಂದು ಅರ್ಥ. ಜೀವಿಗಳಾದ ನಮ್ಮಲ್ಲಿ ಪ್ರತಿಯೊಬ್ಬರೂ ಆನಂದವನ್ನು ಅರಸಿಕೊಂಡು ಹೋಗುತ್ತೇವೆ. ಆದರೆ ಅಂತಹ ಸಂತೋಷವನ್ನು ಪಡೆಯುವ ಪರಿಣತ ಮಾರ್ಗ ನಮಗೆ ತಿಳಿಯದು. ಬದುಕಿನ ವಿಷಯದಲ್ಲಿ ಭೋಗಾಸಕ್ತಿಯ ದೃಷ್ಟಿಯುಳ್ಳ ನಮಗೆ ಹೆಜ್ಜೆ ಹೆಜ್ಜೆಗೂ ಆಶಾಭಂಗವಾಗುತ್ತದೆ. ದಿಟದಲ್ಲಿ ಯಾವ ಎತ್ತರಕ್ಕೆ ಏರಿದರೆ ನೈಜ ಸಂತೋಷವನ್ನು ಅನುಭವಿಸಬಹುದೆಂಬುದು ನಮಗೆ ತಿಳಿಯದಿರುವುದು ನಮ್ಮ ಕಾರಣವಾಗಿದೆ. ಸಂತೋಷವನ್ನು ಅನುಭವಿಸ ಬಯಸುವ ವ್ಯಕ್ತಿಯು ತಾನು ದೇಹವಲ್ಲ, ಒಂದು ಚೇತನ ಎನ್ನುವುದು ಅರ್ಥ ಮಾಡಿಕೊಳ್ಳಬೇಕು.
ಪ್ರಸ್ತುತ ಗ್ರಂಥದ ಲೇಖಕರಾದ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಭಾರತೀಯ ತತ್ವಶಾಸ್ತ್ರ ಹಾಗೂ ಧರ್ಮ ಪರಂಪರೆಗಳಿಗೆ ಸಂಬಂಧಿಸಿದ ಗಂಥಗಳ ಅನುವಾದ ಅವುಗಳ ಮೇಲಿನ ವ್ಯಾಖ್ಯಾನ ಹಾಗೂ ಅಧ್ಯಯನ ರೂಪದ ಬರಹಗಳ ಮೂಲಕ ಅರವತ್ತಕ್ಕೂ ಹೆಚ್ಚಿನ ಸಂಖ್ಯೆಯ ಮೌಲಿಕ ಗ್ರಂಥಗಳನ್ನು ರಚಿಸಿಕೊಟ್ಟಿದ್ದಾರೆ. ಪ್ರಾಮಾಣ್ಯ, ಸಂಕೀರ್ಣತೆ ಹಾಗೂ ಸ್ಪಷ್ಟತೆಗಳಿಗೆ ಇನ್ನೊಂದು ಹೆಸರಾಗಿ, ಶೈಕ್ಷಣಿಕ ವಲಯಗಳಲ್ಲಿ ಖ್ಯಾತರಾದ ಶ್ರೀಲ ಪ್ರಭುಪಾದರ ಕೃತಿಗಳ ಭಾಗಗಳನ್ನು ಪ್ರಪಂಚದಾದ್ಯಂತ ವಿಶ್ವವಿದ್ಯಾಲಯಗಳು ವಿಷಯಗಳನ್ನಾಗಿ ಬಳಸುತ್ತಿವೆ. ಪತ್ರ
Reviews
There are no reviews yet.