ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಇಡೀ ಜಗತ್ತಿಗೆ ಕೃಷ್ಣ ಭಕ್ತಿಯನ್ನು ತಂದುಕೊಟ್ಟ ರೋಚಕ ಕಥೆ
ಆಧುನಿಕ ಸಮಾಜದ ಈ ಹೊತ್ತಿನ ನಾಗರಿಕತೆಯ ದಾರುಣತೆಯನ್ನು ಅರ್ಥ ಮಾಡಿಕೊಂಡ ಒಬ್ಬದಾರ್ಶನಿಕ ಆಧ್ಯಾತ್ಮ ಗುರು ಪ್ರಾಪಂಚಿಕವಾದ ಮತ್ತು ಭೋಗಪರ ಮೌಲ್ಯಗಳ ನಡುವೆಯೇ ಆಧ್ಯಾತ್ಮಿಕ ಮೌಲ್ಯಗಳನ್ನು ಪುನರುಜ್ಜಿವನಗೊಳಿಸಿದ ಕತೆಯನ್ನು ಈ ಪುಟಗಳು ನಮಗೆ ತಿಳಿಸುತ್ತವೆ. ತಾರತಮ್ಯವಿಲ್ಲದೆ ತಮ್ಮ ಬಳಿಬಂದ ಎಲ್ಲರಲ್ಲೂ ಮಾನವೀಯ ಮೌಲ್ಯವನ್ನು ಉದ್ದೀಪಿಸುವ ಅರ್ಥಪೂರ್ಣ ಜೀವನ-ಸಿದ್ಧಾಂತದೊಂದಿಗೆ ವಾಸ್ತವ ಬದುಕಿನ ಕ್ರಮವನ್ನು ತಮ್ಮ ಜೀವನ ಶೈಲಿಯಿಂದ ನೀಡಿದ ಸಂತರೊಬ್ಬರನ್ನು ನಾವು ಈ ಸ೦ದರ್ಭದಲ್ಲಿ ಸಂಧಿಸುತ್ತೇವೆ. ತಮ್ಮ ಬದುಕಿನ ಕೊನೆಯ ವರ್ಷದಲ್ಲಿ ದೈಹಿಕವಾಗಿ ಅಸ್ವಸ್ಥರಾಗಿದ್ದರೂ ಕೂಡ ಶ್ರೀಲ ಪ್ರಭುಪಾದರು ಹೇಗೆ ತಮ್ಮ ಕೊನೆಯ ದಿನದವರೆಗೆ ತಮ್ಮ ಬದುಕನ್ನೇ ಒಂದು ಸ್ಫೂರ್ತಿದಾಯಕ ಉದಾಹರಣೆಯಾಗಿ ಘನವಾದ ರೀತಿಯಲ್ಲಿ ತಮ್ಮ ಶಿಷ್ಯರ ಮುಂದೆ ಮಂಡಿಸಿದರು ಎಂಬುದನ್ನೂ ಕೂಡ ನಾವಿಲ್ಲಿ ನೋಡುತ್ತೇವೆ.
ಧರ್ಮವು ಒಂದು ಜೀವನ ಕ್ರಮವಾಗಬೇಕೆಂಬುದು ನಮಗೆಲ್ಲಾ ಗೊತ್ತಿದೆ. ಆದರೆ ಅಂತಹ ಒಂದು ಜೀವಂತ ಉದಾಹರಣೆ ನಮ್ಮ ಕಣ್ಣೆದುರಿಗೆ ಇದ್ದರೆ ಮಾತ್ರ, ಧಾರ್ಮಿಕ ಕ್ರಮದ ಜೀವನವನ್ನು ಅರ್ಥಮಾಡಿಕೊಳ್ಳುವುದು ಮತ್ತು ಆ ರೀತಿ ನಡೆಯುವುದು ನಮಗೆ ಸುಲಭವಾಗುತ್ತದೆ. ಜಗತ್ತಿನ ಸಾವಿರಾರು ಜನರಿಗೆ ಶ್ರೀ ಪ್ರಭುಪಾದರು ಒಂದು ದಿವ್ಯಾದರ್ಶದ ಸರಳ ಮಾನವೀಕೃತ ರೂಪವಾಗಿದ್ದರು. ಅವರ ಜೀವನ ಚರಿತ್ರೆಯನ್ನು ಓದಿದರೆ ಅವರ ಬೋಧನೆಗಳು ಮತ್ತು ಜೀವನ ಕ್ರಮವು ಒಂದು ಬಗೆಯ ಸಮಾಧಾನದ ನಸುಬೆಳಕು ಘಾಸಿಗೊಳಗಾದ ಮನುಕುಲದ ಮುಖದ ಮೇಲೆ ಬೀಳುತ್ತಿರುವಂತೆ ಭಾಸವಾಗುವುದರಲ್ಲಿ ಸಂಶಯವಿಲ್ಲ.
Reviews
There are no reviews yet.